ಕೃತಜ್ಞದಲ್ಲಿ, ನಾವು ನಾವೀನ್ಯತೆ, ಪ್ರವೇಶ ಸಾಧ್ಯತೆ ಮತ್ತು ವಿಶ್ವಾಸದ ಮೂಲಕ ರೈತರು ಹಾಗೂ ಗ್ರಾಮೀಣ ಸಮುದಾಯಗಳು ಅಭಿವೃದ್ಧಿ ಹೊಂದುವ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ. ನಾವು ಕೇವಲ ಕೃಷಿ ಸ್ಟಾರ್ಟ್‌ಅಪ್ ಮಾತ್ರವಲ್ಲ — ಇಂದಿನ ಬದಲಾಗುತ್ತಿರುವ ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ರೈತರಿಗೆ ಅಗತ್ಯವಾದ ಸಾಧನಗಳು, ಜ್ಞಾನ ಮತ್ತು ಸೇವೆಗಳೊಂದಿಗೆ ಶಕ್ತಿಗೊಳಿಸುವ ಒನ್ -ಸ್ಟಾಪ್ ಪ್ಲಾಟ್‌ಫಾರ್ಮ್ ಆಗಿದ್ದೇವೆ.
ನಮ್ಮ ಪ್ರಯಾಣವು ಒಂದು ಸರಳ ದೃಷ್ಟಿಯಿಂದ ಆರಂಭವಾಯಿತು: ಗ್ರಾಮೀಣ ಉತ್ಪಾದಕರು ಮತ್ತು ಅವಕಾಶಗಳ ನಡುವಿನ ಅಡೆತಡೆಗಳನ್ನು ನೀವಾರಿಸುವುದು. ನಾವು ಕೃಷಿ ಸಾಧನ-ಸಲಕರಣೆಗಳು, ಗುಣಮಟ್ಟದ ಉತ್ಪನ್ನಗಳ ಸಂಗ್ರಹಣೆ, ಕೃಷಿ ಕ್ಷೇತ್ರದ ಸೇವೆಗಳು ಹಾಗೂ ಕೃಷಿ ಸಾಲ ಸೌಲಭ್ಯ - ಎಲ್ಲವನ್ನೂಒಂದೇ ಸೂರಿನಡಿಯಲ್ಲಿ ಒದಗಿಸುತ್ತೇವೆ.
ಕೃತಜ್ಞ ಬಳಸುವ ರೈತರು ನ್ಯಾಯಯುತ ಬೆಳೆಗಳಲ್ಲಿ ನಂಬಿಕೆ ಮಧ್ಯವರ್ತಿಗಳಿಲ್ಲದೆ ವಿಶ್ವಾಸಾರ್ಹ ಮಾರುಕಟ್ಟೆಗಳಿಗೆ ಮಾರಾಟ ಮಾಡಬಹುದು. ಪಾರದರ್ಶಕತೆಯೊಂದಿಗೆ ತಮ್ಮ ಕೃಷಿ ಭೂಮಿಯನ್ನು ನಿರ್ವಹಿಸಬಹುದು ಜೊತೆಗೆ ಕೃತಜ್ಞ ಸಹಕಾರ ಬ್ಯಾಂಕ್ ಮೂಲಕ ಕೃಷಿ ಸಾಲಗಳು, ಉಳಿತಾಯ ಯೋಜನೆಗಳು ಮತ್ತು ವೈಯಕ್ತಿಕ ಅಗತ್ಯತೆಗಳಿಗೆ ಆರ್ಥಿಕ ಸೇವೆಗಳ ಪ್ರಯೋಜನ ಪಡೆಯಬಹುದು.
ನಾವು ಸಮರ್ಥ ಬೆಳವಣಿಗೆ, ಕೃಷಿ ಸಮುದಾಯಗಳ ಅಭಿವೃದ್ಧಿ ಹಾಗೂ ಅತ್ಯಂತ ಹಿಂದುಳಿದ ಹಳ್ಳಿಗಳಿಗೂ ತಲುಪುವ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಹೊಂದಿದ್ದೇವೆ ನಮ್ಮ ಗುರಿ ಸರಳವಾಗಿದೆ ಪ್ರತಿಯೊಬ್ಬ ರೈತನಿಗೂ ಯಶಸ್ಸು ಸಾಧಿಸಲು ಅಗತ್ಯವಾದ ಸೇವೆ ಮತ್ತು ಸಾಧನಗಳನ್ನು ಒದಗಿಸಿ ಅವರಿಗೆ ಅರ್ಹವಾದ ಗೌರವವನ್ನು ಒದಗಿಸುವುದು.
ನಮ್ಮ ಧ್ಯೇಯ ಸರಳವಾಗಿದೆ: ರೈತರನ್ನು ಮೊದಲ ಸ್ಥಾನದಲ್ಲಿ ಇರಿಸುವುದು - ಉತ್ತಮ ಮಾರುಕಟ್ಟೆ ವಿಶ್ವಾಸ ಅರ್ಹ ಸಾಲಗಳನ್ನು ಒದಗಿಸಿ ಕೃಷಿ ಕುಟುಂಬಗಳು ವರ್ಷಪೂರ್ತಿ ಅಭಿವೃದ್ಧಿಹೊಂದುವಂತೆ ಸಹಕರಿಸುವುದು
ರೈತರು ಖರೀದಿದಾರರೊಂದಿಗೆ ನೇರ ಸಂಪರ್ಕ ಸಾಧಿಸಿ, ಅನಾವಶ್ಯಕ ಹಾಗೂ ದುಬಾರಿ ಮಧ್ಯವರ್ತಿಗಳನ್ನು ದೂರಮಾಡಿ, ಪ್ರತಿಯೊಂದು ವ್ಯವಹಾರದಲ್ಲೂ ಪಾರದರ್ಶಕತೆಯನ್ನು ಖಾತ್ರಿಪಡಿಸಬಹುದು.
ಕೃತಜ್ಞ ಸಹಕಾರ ಬ್ಯಾಂಕಿನ ಮೂಲಕ, ರೈತರು ತಮ್ಮ ಋತುಚಕ್ರಗಳಿಗೆ ಅನುಗುಣವಾಗಿ ಸಾಲಗಳು ಮತ್ತು ಉಳಿತಾಯ ಸೌಲಭ್ಯಗಳನ್ನು ಪಡೆಯಬಹುದು.
ರೈತರು ಸಮರ್ಥ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಹಾಗೂ ಸ್ಪರ್ಧಾತ್ಮಕ ಮಾರುಕಟ್ಟೆಗಳಲ್ಲಿ ಯಶಸ್ಸು ಸಾಧಿಸಲು ನೆರವಾಗುವ ತರಬೇತಿ, ಸಾಧನಗಳು ಮತ್ತು ಸೇವೆಗಳನ್ನು ಒದಗಿಸಲಾಗುತ್ತದೆ.
ಪ್ರತಿ ವಹಿವಾಟು ಸುರಕ್ಷಿತ ಮತ್ತು ಪಾರದರ್ಶಕವಾಗಿದೆ, ರೈತರು ಮತ್ತು ಅವರ ಸಮುದಾಯಗಳ ನಡುವೆ ಶಾಶ್ವತ ಸಂಬಂಧಗಳನ್ನು ನಿರ್ಮಿಸುತ್ತದೆ.
ಸಹಯೋಗ, ಹಂಚಿಕೊಂಡ ಜ್ಞಾನ ಮತ್ತು ಪರಸ್ಪರ ಬೆಂಬಲ ವ್ಯವಸ್ಥೆಗಳ ಮೂಲಕ ಬಲವಾದ ಗ್ರಾಮೀಣ ಸಮುದಾಯಗಳನ್ನು ನಿರ್ಮಿಸುವುದು.
ಉತ್ತಮ ಗುಣಮಟ್ಟದ ಮಾನದಂಡಗಳನ್ನು ಪಾಲಿಸುವ ಮೂಲಕ ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡಲು ಸಹಾಯವಾಗುತ್ತದೆ.

ಉತ್ತಮ ತಂತ್ರಜ್ಞಾನ, ಪರಿಸರ ಸ್ನೇಹಿ ಕೃಷಿ ವಿಧಾನಗಳು ಹಾಗೂ ಸುಲಭವಾಗಿ ದೊರೆಯುವ ಸಾಲ ಸೌಲಭ್ಯಗಳ ಮೂಲಕ ರೈತರಿಗೆ ನೆರವಾಗಲು ನಾವು ಪ್ರಯತ್ನಿಸುತ್ತಿದ್ದೇವೆ — ರೈತರಿಗೆ ಸರಿಯಾದ ಬೆಲೆ, ನಂಬಿಕೆಯನ್ನು ಕೊಡುತ್ತಾ, ಅವರ ಬದುಕು ಬೆಳೆಯುವಂತೆ ಒಗ್ಗೂಡಿದ ಕೃಷಿ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ.
ಇನ್ನಷ್ಟು ತಿಳಿಯಿರಿ